ಏನ ಬೇಡಲಿ ನಿನ್ನ ಬಳಿಗೆ ಬಂದು?
ಎಲ್ಲಕ್ಕೂ ನೀನಿರುವಾಗ ನನಗಿದ್ದೀತೇ ಕೊರತೆ ಒಂದು?
ನೋವಾದರೆ ವಿವೇಕ ರೂಪನಾಗಿ ಸಾಂತ್ವನ ನೀಡುವೆ!
ಹೆದರಿಕೆಯಾದರೆ ನಾಮರೂಪದಲ್ಲಿ ಅಭಯ ನೀಡುವೆ!
ಪ್ರಶ್ನೆಗಳು ಕಾಡಿದಾಗ ಉತ್ತರ ರೂಪದಲ್ಲಿ ಶಾಂತಿ ನೀಡುವೆ!
ಎಲ್ಲಕ್ಕಿಂತ ಮಿಗಿಲಾಗಿ ನಿನ್ನಲ್ಲಿ ನನಗೆ ನಂಬಿಕೆಯನ್ನು ನೀಡಿರುವೆ!
ಹೀಗಿರುವಾಗ, ನನ್ನ ಕಾಂತನೆ! ನನ್ನ ರಮಣನೇ!
ಏನ ಬೇಡಲಿ ನಿನ್ನ ಬಳಿಗೆ ಬಂದು?
ಏನೂ ನೀಡದೆ ಎಲ್ಲವನ್ನೂ ನೀಡಿರುವೆ!
ಏನೂ ಹೇಳದೆ ಎಲ್ಲವನ್ನೂ ನುಡಿದಿರುವೆ!
ಏನೂ ಕೊಳ್ಳದೆ ಎಲ್ಲವನ್ನೂ ದೋಚಿರುವೆ!
ಏನೂ ಮಾಡದೆ ನನ್ನನ್ನು ಸೂರೆಗೊಂಡಿರುವೆ!
ಸಾಕಯ್ಯ ಸಾಕು, ಗುರು ವೆಂಕಟರಮಣ!
ನಿನ್ನ ನಾಮವೊಂದೇ ನನ್ನ ಬಾಳಿಗೆ!
ಏನ ಬೇಡಲಿ ನಿನ್ನ ಬಳಿಗೆ ಬಂದು?
ಎಲ್ಲಕ್ಕೂ ನೀನಿರುವಾಗ ನನಗಿದ್ದೀತೇ ಕೊರತೆ ಒಂದು?
Sunday, June 28, 2009
Can I?
Can I offer the duality in mind as padukas to Thy Holy Feet?
Can I wash Thy Holy Feet with my tears - joyful or sorrowful?
Can I dry Thy washed Holy feet with my vasanas?
Can I offer my desires as flower to worship Thy Holy Feet?
Can I wash Thy Holy Feet with my tears - joyful or sorrowful?
Can I dry Thy washed Holy feet with my vasanas?
Can I offer my desires as flower to worship Thy Holy Feet?
Subscribe to:
Posts (Atom)